Saturday, September 19, 2020

Vishnuvardhan's father H. Lakshminarayana Rao & Mother Kamakshamma ವಿಷ್ಣುವರ್ಧನ್ ರವರ ತಂದೆತಾಯಿಗಳು ಎಚ್. ಲಕ್ಷ್ಮಿನಾರಾಯಾಣ ರಾವ್ & ಕಾಮಾಕ್ಷಮ್ಮ

 Vishnuvardhan's father H. Lakshminarayana Rao & Mother Kamakshamma ವಿಷ್ಣುವರ್ಧನ್ ರವರ ತಂದೆತಾಯಿಗಳು ಎಚ್. ಲಕ್ಷ್ಮಿನಾರಾಯಾಣ ರಾವ್ & ಕಾಮಾಕ್ಷಮ್ಮ.

Vishnuvardhan's father H. Lakshminarayana Rao ವಿಷ್ಣುವರ್ಧನ್ ರವರ ತಂದೆ ಎಚ್. ಲಕ್ಷ್ಮಿನಾರಾಯಣ ರಾವ್





Vishnuvardhan's Mother Kamakshamma ವಿಷ್ಣುವರ್ಧನ್ ತಾಯಿ ಕಾಮಾಕ್ಷಮ್ಮ




Tuesday, July 21, 2020

ಕನ್ನಡಕ ತಂದ ಆಪತ್ತು - ಮೆಜೆಸ್ಟಿಕ್ ನಲ್ಲಿ ನಡೆದದ್ದು

ಚೋರರಿಗೊಂದು ಕಾಲ.



ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಕೆಜಿ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ, 

ಒಬ್ಬ ಕನ್ನಡಕ ಮಾರುವಾತ ಎದುರುಗೊಂಡ, ನನ್ನ ಕುರಿತು
"ಸಾರ್, ಬರೀ ಎರಡು ರೂಪಾಯಿ" ತಗೊಳ್ಳಿ ಸಾರ್ ಎಂದ.

ನನಗೆ ಆಶ್ಚರ್ಯ, ಸಂತೋಷದಿಂದ "ಬರೀ ಎರಡು ರೂಪಾಯಿ ಮಾತ್ರಾನಾ...!!" ಎಂದೆ.

"ಹೌದು"

ನಾನು ಜೇಬಿನಿಂದ ಹಣ ತೆಗೆದು "ಚಿಲ್ಲರೆ ಇದೆಯಾ..?" ಎಂದು ಹಣ ಕೊಡಲು ಹೋದೆ.

"ಸ್ವಲ್ಪ ತಡೆಯಿರಿ ಸರ್, ಇದನ್ನು ಒಂದು ಸಾರಿ ಹೇಗೆ ಬಳಸುವುದು ಎಂದು ತೋರಿಸ್ತೀನಿ"

ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ನನ್ನ ಹಾಗೆ ಅದನ್ನು ಕೊಳ್ಳುವ ಆಸೆಯಿಂದ ಅಲ್ಲಿಗೆ ಬಂದ.

ಕನ್ನಡಕ ಮಾರುವಾತ ಒಂದು ಕನ್ನಡಕವನ್ನು ನನಗೆ ಹಾಕಿದ.. ನಂತರ ಜೇಬಿನಿಂದ ಒಂದು ವೈಟ್ ಪೇಪರ್ ತೆರೆದು "ಇದು ಯಾವ ಕಲರ್..?" ಎಂದ.

ನಾನು "ಬಿಳಿ" ಎಂದೆ.

ಆತ "ಓಹ್, ಗುಡ್" ಎಂದು ಮತ್ತೊಂದು ಪೇಪರ್ ತೆಗೆದ, ಕೆಂಪೋ... ನೀಲಿಯೋ.. ಇರಬೇಕು ಮರೆತಿದ್ದೇನೆ.

"ಇದು ಯಾವ ಕಲರ್ ಸಾರ್" 

ನಾನು ಸರಿಯುತ್ತರ ನೀಡಿದೆ.

ಆತ ಖುಷಿಯಿಂದ "ನೋಡಿ ಎಷ್ಟು ಚೆನ್ನಾಗಿ ವರ್ಕ್ ಆಗುತ್ತದೆ" ಎಂದ.

ನನಗೆ ಇಷ್ಟೆಲ್ಲಾ ಪರೀಕ್ಷೆ ಬೇಕಾಗಿರಲಿಲ್ಲ, ವಿತೌಟ್ ಎಕ್ಸಾಮ್ ನಾನು ಅವನು ಕೇಳಿದ ಬೆಲೆಗಿಂತ 5 ಪಟ್ಟು ಹೆಚ್ಚು ಕೊಡಲು ಸಿದ್ದನಿದ್ದೆ., ಹಾಗಾಗಿ ಅವಸರಿಸಿದೆ.

ಆತ ಅವಸರದಲ್ಲಿ ಇದ್ದಂತೆ ಕಾಣಲಿಲ್ಲ.., ಮತ್ತೊಬ್ಬ ವ್ಯಕ್ತಿ ಕೊಳ್ಳಲು ಬಂದವನು..., "ಬೆಲೆ ಎಷ್ಟು ಸರ್" ಎಂದ.

ಈತ ಕೂಲಾಗಿ.. "ಸಾರ್ ಇದು ಅಂಗಡಿಗಳಲ್ಲಿ 5000/- ಆಗುತ್ತದೆ, ನಾನೊಬ್ಬ ಕಳ್ಳ ಕದ್ದಿದ್ದೇನೆ, ನನಗೆ 2000/- ದ ಮೇಲೆ ರೂ.2/- ಲಾಭ ಕೊಡಿ " ಎಂದ.

ನನಗೆ ಈತನ ಮಾತುಗಳು ಏನೇನೂ ಅರ್ಥವಾಗಲಿಲ್ಲ..., ಆದರೆ ಮತ್ತೊಬ್ಬ ನನಗಿಂತ ಬಹಳ ಬುದ್ದಿವಂತ ಹಾಗಾಗಿ ನನಗಿಂತ ಬೇಗ ಅದರ ಬೆಲೆ Rs.2002/- ಎಂದು ಅರ್ಥ ಮಾಡಿಕೊಂಡ. ಕೂಡಲೇ "ನನಗೆ ಬೇಡ" ಎಂದ.

ಈತ ಅವನ ಹೊಟ್ಟೆಗೆ ಒಮ್ಮೆ ಗುದ್ದಿದ.., "ಬೇಡದಿದ್ದ ಮೇಲೆ, ಯಾಕೆ ಕೊಳ್ಳಲು ಬಂದೆಯೋ ಐವಾನ್.." ಎಂದು ಬೈಯುತ್ತಲೇ "ನಿನಗೆ ಎಷ್ಟಕ್ಕೆ ಬೇಕು...?" ಎಂದು ಕೇಳಿದ.

ನನಗೆ ಒಮ್ಮೆಲೆ ಶಾಕ್, ಇಷ್ಟೊತ್ತು ಒಬ್ಬ ವ್ಯಾಪಾರಿಯಂತೆ ಸಾರ್ ಸಾರ್ ಎನ್ನುತ್ತಿದ್ದವನು, ಡೆಮೋ ಸಹಾ‌ ಕೊಟ್ಟವನು ಈಗ ಇದ್ದಕ್ಕಿದ್ದಂತೆ ರೌಡಿಯಾಗಿ ಬದಲಾಗಿದ್ದ. 

ಈ ರೌಡಿ, ಆ ಇನ್ನೊಬ್ಬ ವ್ಯಕ್ತಿಗೆ "ಎಷ್ಟಕ್ಕೆ ಬೇಕೋ ಕೇಳೋ" ಎಂದು ಗದರಿದ.

ಅವನು "ಸಾರ್... ರೂ.800/- ಕ್ಕೆ ಕೊಡಿ" ಎಂದ.

"ಆ ಬೆಲೆಗೆ ಬರಲ್ಲಯ್ಯ.. ನೀನು ಹೋಗು" ಎಂದು ಹೇಳಿದ.

ನನಗೆ ಭಯ ಆಯಿತು, ಎದೆ ಹೊಡಕೊಳ್ತಿತ್ತು, ಗಂಟಲಿನ ತೇವ ಆರಿಹೋಗಿ, ಮಾತು ತೊದಲಲು ಶುರುವಾಯಿತು.

ನನ್ನ ಜೊತೆಗೆ ಇನ್ನೊಬ್ಬ ಗ್ರಾಹಕ ಇದ್ದದ್ದರಿಂದ ಸ್ವಲ್ಪ ಧೈರ್ಯ ಇತ್ತು.

ಈಗ ನನ್ನ ಕಡೆಗೆ ತಿರುಗಿ "ನಿನಗೆ ಎಷ್ಟಕ್ಕೆ ಬೇಕು" ಎಂದ.

ನಾನು ಸ್ವಲ್ಪ ಟ್ಯೂಬಲೈಟ್, ನನಗೆ ಈಗ ಇವರಿಬ್ಬರೂ ಪಾರ್ಟನರ್ಸ್ ಎಂದೂ... ಅರ್ಥವಾಯಿತು, ಅವನು ಎಂಟುನೂರಕ್ಕೇ ಕೇಳಿದ್ದು..., ಇವನು ಕೊಡಲ್ಲ ಎಂದಿದ್ದು..., ಎರಡೂ ನನಗೆ ಟೋಪಿ ಹಾಕಲು ಮಾಡಿದ ನಾಟಕ ಎಂದು ಸಹಾ ಗೊತ್ತಾಯಿತು.

ಈಗ ನನ್ನ ಸ್ಥಾನದಲ್ಲಿರುವ ಗ್ರಾಹಕ ಐನೂರಕ್ಕೋ ಎಂಟುನೂರಕ್ಕೋ ಕೇಳಿದರೆ, ಅವನು "ಕೊಡಲ್ಲ ಹೋಗು" ಅಂತಾನೆ, ಆಗ ನಾವು ಆರಾಮಾಗಿ ಇಲ್ಲಿಂದ ಹೋಗಬಹುದು ಎಂದು ಯೋಚಿಸುತ್ತಾನೆ.

ಆದರೆ ವಸ್ತು ಸ್ಥಿತಿ ಬೇರೆ ಇದ್ದು, ನಾವು ಕೇಳುವ ಬೆಲೆಗೆ ೫೦೦ ಅಥವಾ ೮೦೦ಕ್ಕೆ ಅವನು ಕೊಡಲು ರೆಡಿ ಇರ್ತಾನೆ, ಇನ್ನೊಬ್ಬನಿಗೆ ಕೊಡಲ್ಲ ಹೋಗು ಎಂದಿದ್ದು...ನಾನೂ ಸಹಾ ಅದೇ ಬೆಲೆಗೆ ಕೇಳಲಿ ಎಂಬ ದುರಾಲೋಚನೆಯಿಂದ.

ಮುನ್ನೆಚ್ಚರಿಕೆಯಿಂದ ನನ್ನ ಕೈಯನ್ನು ಸಹಾ ಹಿಡಿದುಕೊಂಡ.

ಈಗ ನಾನು ಕಮಿಟ್ ಆದರೆ ಅದನ್ನು ಕೊಳ್ಳಲೇಬೇಕಾಗುತ್ತದೆ.. ಎಂಬ ಅರಿವು ನನಗೆ ಬಂತು.

ಬೇಡ ಎಂದರೆ ಹೊಟ್ಟೆಗೆ ಗುದ್ದುತ್ತಾನೇನೋ ಎಂಬ ಭಯ ಇದ್ದುದರಿಂದ ನಾನು ಸ್ವಲ್ಪ ಹುಷಾರಾದೆ, "ನನ್ನ ಹತ್ತಿರ ಅಷ್ಟು ಹಣ ಇಲ್ಲ" ಎಂದೆ.

ಎಷ್ಟು ಇದೆ?

ನನಗೆ ಮತ್ತೊಮ್ಮೆ ಪೀಕಲಾಟಕ್ಕೆ ಬಂದಿತು, ಈಗ ಜೇಬಲ್ಲಿನ ಹಣ ಇವರು ಕಿತ್ತುಕೊಳ್ತಾರೆ ಅನ್ನೊದು ಖಾತ್ರಿಯಾಯಿತು.

ಬೇಡ ಎಂದರೆ ಏಟು, ಬೆಲೆಗೆ ಕೇಳಿದರೆ ಕೊಳ್ಳಬೇಕಾಗುತ್ತದೆ, ಈಗ ನನಗೆ ರೂ.2ಕ್ಕೆ ಕೇಳುವಷ್ಟು ಧೈರ್ಯ ಇರಲಿಲ್ಲ.

ಮನಸ್ಸಿನಲ್ಲಿಯೇ ಆಂಜನೇಯ, ಶನಿಮಹಾತ್ಮ, ಗಣಪತಿ ಎಲ್ಲಾ ದೇವರುಗಳಿಗೆ ಪ್ರಾರ್ಥಿಸಲಾರಂಭಿಸಿದೆ.

ಅವನು ನನ್ನ ಕೈ ಸ್ವಲ್ಪ ಲೂಸಾಗಿ ಹಿಡಿದುಕೊಂಡಿದ್ದ... ನಾನು ಒಮ್ಮೆ ಕೈ ಕೊಡವಿದವನು ಸಿಕ್ಕಿದ ಸಂದಿಯಲ್ಲಿ ಸತ್ತೆನೋ ಕೆಟ್ಟೆನೋ ಎಂದು ಓಡಿಹೋದೆ.

ಕಪಾಲಿ ಥಿಯೇಟರ್ ಸಿಕ್ಕಿತು, ಅಲ್ಲಿಂದ ಮತ್ತೊಂದು ಸಂದಿಯಲ್ಲಿ ತೂರಿ, ಇನ್ನೊಂದು ಸಂದಿಯಿಂದ ಹೊರಬಂದು ಆನಂದ ರಾವ್ ಸರ್ಕಲ್ ದಾಟಿ ಓಡಿಹೋದೆ.

ಪಿ.ಟಿ. ಉಷಾ ಮತ್ತು ಉಸೇನ್ ಬೋಲ್ಟ್ ಏನಾದರೂ ನನ್ನ ಓಟವನ್ನು ನೋಡಿದ್ದರೆ ಖಂಡಿತಾ ನಾಚಿಕೆಪಟ್ಟುಕೊಳ್ಳುತ್ತಿದ್ದರು... ಇವನ ಓಟದ ಮುಂದೆ ನಾವೇನು ಇಲ್ಲವೆಂದು.

ಇದು 2008 ರಲ್ಲಿ ನಾನು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಎದುರಿಸಿದ್ದ ಸತ್ಯ ಘಟನೆ.., ಇದರಲ್ಲಿ ಬರುವ ಪ್ರತಿಯೊಂದು ವಿವರವೂ ಅಕ್ಷರಶಃ ಸತ್ಯ.

ಬೆಂಗಳೂರಿಗೆ ಹೋಗುವ ಹೊಸಬರು ಫುಟ್‌ಫಾತ್, ರಸ್ತೆಗಳಲ್ಲಿ, ಸೊಂದಿಗಳಲ್ಲಿ ಏನನ್ನು ಕೊಳ್ಳಲು ಹೋಗಬೇಡಿ.

***
ಚೋರರಿಗೊಂದು ಕಾಲ ನನ್ನ ಪ್ರತಿಲಿಪಿ ಧಾರಾವಾಹಿಯಿಂದ ತೆಗೆದುಕೊಳ್ಳಲಾಗಿದೆ.

***
ಸ್ವತಃ ಅನುಭವ.

by
Maruthi Vardhan 
ಮಾರುತಿವರ್ಧನ್.



Friday, July 3, 2020

ಪತ್ರಕ್ಕೆ ಬರೆದ ಪ್ರತ್ಯುತ್ತರವೇ ವ್ಯಕ್ತಿತ್ವದ ಪರಿಚಯದ ಐಡೆಂಟಿಟಿ ಕಾರ್ಡ್ ಆಯಿತು.

ಗಾಂಧೀಜಿ ಯವರ ಬಗ್ಗೆ ನಮಗೆ ಅನೇಕ ವಿಷಯ ತಿಳಿಯುವುದು ಅವರು ವಿವಿಧ ವ್ಯಕ್ತಿಗಳಿಗೆ ಬರೆದ ಪತ್ರಗಳಿಂದ... ಮತ್ತು ಇತರರ ಪತ್ರಗಳಿಗೆ ಬರೆದ ಉತ್ತರಗಳಿಂದ

"ಪತ್ರಕ್ಕೆ ಬರೆದ ಪ್ರತ್ಯುತ್ತರ, ಒಂದು ವ್ಯಕ್ತಿಯ ಪರಿಚಯದ ಐಡೆಂಟಿಟಿ ಕಾರ್ಡ್ ಆಯಿತು. ಗಾಂಧೀಜಿ.", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/5g5vljham8di?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ


Monday, December 9, 2019

The Forbidden Kingdom in English, हिन्दी , తెలుగు., Tamil. English, Hindi, Tamil Telugu

English, हिन्दी , తెలుగు., Tamil.
English, Hindi, Tamil Telugu

The Forbidden Kingdom

Greatest Movie of Jockie Chan & Jetli.

presentation, narration, story representation is the best in the world.

Don't miss the fight between legends at 37.00 minutes

Hindi- https://youtu.be/BJVAnC1MV8A
English - https://youtu.be/qGRHBzEP_oM
HD- https://youtu.be/6upvc7QTAxI
Tamil- https://youtu.be/QukYyzse9Ic
Telugu- https://youtu.be/MbN_KnlPbes













Sunday, December 8, 2019

ಡಾ.ವಿಷ್ಣುವರ್ಧನ್ ಈ ಮಾತನ್ನು ಹೇಳಿದ್ದು ಯಾಕೆ?, "ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ತೋಟದಲ್ಲಿ ಇದ್ದ ಮಾಲಿ ಅಷ್ಟೇ..!!".

ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ ತೋಟದಲ್ಲಿ ಕಾವಲ ಇದ್ದ ಮಾಲಿ ಅಷ್ಟೇ" ಎಂಬ ಮಾತು ವಿಷ್ಣುವರ್ಧನ್ ಅವರು ಹೇಳಿದ್ದು ಎಲ್ಲಿ?

**

ಶಶಿಕುಮಾರ್  ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ, ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ  ವಿಲನ್ ಆದರೂ  ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ.  ಶಶಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು.

ದುರದೃಷ್ಟವಶಾತ್ ಅವರಿಗೆ ಅಪಘಾತ ಆಯಿತು, ಮುಖದ ಸೌಂದರ್ಯ ಹಾಳಾಯಿತು,

ಇನ್ನೇನು ಎಲ್ಲವೂ ಮುಗಿಯಿತು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಶಶಿಕುಮಾರ್ ರವರಿಗೆ ಒಂದು ಸುವರ್ಣಾವಕಾಶ ಸಿಕ್ಕಿತು.

 "ಹಬ್ಬ" ಸಿನಿಮಾ. ಈ ಚಿತ್ರ ಸುಪ್ರೀಂ ಹೀರೋ ಜೀವನದಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ತಂದಿತು. ಡಾ ವಿಷ್ಣುವರ್ಧನ್, ಅಂಬರೀಷ್, ದೇವರಾಜ್, ರಾಮ್ ಕುಮಾರ್ ಮತ್ತು ಶಶಿ ಕುಮಾರ್ ನಟಿಸಿದ ಹಬ್ಬ ಚಿತ್ರವು ಸೂಪರ್ ಹಿಟ್ ಆಯ್ತು. ಅಲ್ಲಿಂದ ಮತ್ತೆ ಶಶಿ ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಆದರು.

ಶಶಿಕುಮಾರ್ ಅವರು ಹಬ್ಬ ಸಿನಿಮಾದಲ್ಲಿ ನಟಿಸಿದ್ದು ಶಶಿಕುಮಾರ್ ಅವರ ಪತ್ನಿಗೂ ಖುಷಿ ಇತ್ತಂತೆ. ಯಾಕೆಂದರೆ, ಈ ಚಿತ್ರದಲ್ಲಿ ಶಶಿಕುಮಾರ್ ನಟಿಸಿದ್ದು ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿತ್ತಂತೆ. ಸುಳ್ಳನ್ನೇ ಹೇಳದ ವ್ಯಕ್ತಿ ಪಾತ್ರದಲ್ಲಿ ಹಬ್ಬ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದರು. 1999 ಏಪ್ರಿಲ್ 16 ರಂದು ಬಿಡುಗಡೆಯಾದ ಹಬ್ಬ ಚಿತ್ರವನ್ನು ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಹಂಸಲೇಖ ಸಂಗೀತ ನೀಡಿದ್ದರು.

ಕನ್ನಡದ ನಟ, ಸುಪ್ರಿಂ ಹೀರೋ ಶಶಿಕುಮಾರ್ ಬದುಕಿನಲ್ಲಿ ನಡೆದ ಆ ಅಪಘಾತ ನಟನ ಬದುಕನ್ನೇ ಬದಲಾಯಿಸಿಬಿಟ್ಟತು. 1998 ಜುಲೈ 31 ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಸುಪ್ರೀಂ ಹೀರೋ ಶಶಿ ಕುಮಾರ್ ಅವರ ಕಾರು ಅಪಘಾತವಾಯಿತು.ಆ ಆಕ್ಸಿಡೆಂಟ್‌ನಲ್ಲಿ ನಟ ಶಶಿ ಕುಮಾರ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿ ಮೂಗಿಗೆ ಹೆಚ್ಚು ಡ್ಯಾಮೇಜ್ ಆಯಿತು.

ಸತತ 8 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಒಂದು ಹಂತಕ್ಕೆ ಶಶಿಕುಮಾರ್ ಅವರ ಮುಖದಲ್ಲಿ ಸ್ವಲ್ಪ ಚೇತರಿಕೆಯಾಯಿತು. ಆದರೆ, ಅದರಿಂದ ಶಶಿಕುಮಾರ್ ಅವರಿಗೆ ಡ್ಯಾನ್ಸ್ ಮಾಡೋಕೆ ಆಗಲ್ಲ, ಫೈಟ್ ಮಾಡೋಕೆ ಆಗಲ್ಲ, ಅದೂ ಇದೂ ಎಂದು ಪತ್ರಿಕೆಗಳಲ್ಲಿ ವರದಿಯಾದ ಪರಿಣಾಮ ಯಾವ ಸಿನಿಮಾ ಅವಕಾಶವೂ ಅವರಿಗೆ ಸಿಗಲಿಲ್ಲ.ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಶಿಕುಮಾರ್ ಗೆ ಆಗ ಮದುವೆ ಆಗಿ ಇಬ್ಬರು ಮಕ್ಕಳು ಕೂಡ ಇದ್ದರು.

ವಿಷ್ಣುವರ್ಧನ್ ಅವರ ಜೊತೆ ಉತ್ತಮ ಭಾಂದವ್ಯವಿದ್ದ ಶಶಿಕುಮಾರ್ ಇವರಿಬ್ಬರ ಕಾಂಬಿನೇಶನ್‌ನ ಎಲ್ಲಾ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ.

ಕುಂತೀಪುತ್ರ
ತುಂಬಿದ ಮನೆ
ಹಬ್ಬ
ಯಜಮಾನ
ಸಾಹುಕಾರ

ವಿಷ್ಣುವರ್ಧನ್ ಚಿತ್ರದಲ್ಲಿ ಇದ್ದಾರೆ ಎಂದಕೂಡಲೇ ಆ ಚಿತ್ರಕ್ಕೆ ಕಾಲ್‌ಶೀಟ್ ಕೊಡುತ್ತಿದ್ದರು ಶಶಿಕುಮಾರ್.

**
ಸಾಹುಕಾರ ಚಿತ್ರದ ಒಂದು ಪಾತ್ರಕ್ಕಾಗಿ ನಿರ್ದೇಶಕರು ಇವರನ್ನು ಸಂಪರ್ಕಿಸಿದಾಗ, ಸಾಹುಕಾರನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದರೆ ಮಾತ್ರ ನಾನು ಈ ಚಿತ್ರದ ಜೂನಿಯರ್ ಸಾಹುಕಾರ್ ಪಾತ್ರ ಮಾಡ್ತೇನೆ ಎಂದು ಹಠ ಹಿಡಿದಿದ್ದರಂತೆ ಶಶಿಕುಮಾರ್, ಹೀಗಾಗಿ ರವಿಚಂದ್ರನ್ ಅವರು ‌ದ್ವಿಪಾತ್ರದಲ್ಲಿ ನಟಿಸಬೇಕಾಗಿದ್ದ ಈ ಚಿತ್ರದ ಹಿರಿಯ ತಂದೆಯ ಪಾತ್ರಕ್ಕೆ ವಿಷ್ಣು ಅವರ ಪ್ರವೇಶವಾಯಿತು...
ಈ ಚಿತ್ರದ ವಿಷ್ಣುವರ್ಧನ್ ಪಾತ್ರ ಸೇಮ್ ಟು ಸೇಮ್ ಸಾಯಿಬಾಬಾ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು.

ಹೀಗೆ ರವಿಚಂದ್ರನ್ ಅವರಿಗೆ ಒಂದು ಪಾತ್ರ ತಪ್ಪಿಸಿದ್ದರು, ಹೀಗಾಗಿ ತಂದೆಯ ಪಾತ್ರವನ್ನು ವಿಷ್ಣುವರ್ಧನ್ ಅವರಿಗೆ ಬಿಟ್ಟುಕೊಟ್ಟು ಮಗನ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು,

ಅವರ ಮೇಲಿನ ಪ್ರೀತಿಗಾಗಿ ವಿಷ್ಣುವರ್ಧನ್ ಈ ಹಿಂದೆಯೇ ಪ್ರೇಮಲೋಕ, ಯಾರೇ ನೀನು ಚೆಲುವೆ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು..

(ಆ ಕಾಲದಲ್ಲೇ ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ ಕೆಲವೇ ಕೆಲವು ನಟರಲ್ಲಿ ಶಶಿಕುಮಾರ್ ಕೂಡಾ ಒಬ್ಬರು! - ಪಾಳೇಗಾರ ವಾಸು.

ಶಸಿಕುಮಾರ್ ಒಳ್ಳೆಯ ಡಾನ್ಸರ್ ಕೂಡ. ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ  ವಿಲನ್ ಆದರೂ  ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ.  ಶಸಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು. - ಮೊಹಮದ್ ಇಕ್ಬಾಲ್ ಕರಿಂಗಳ.

ಶಶಿಕುಮಾರ್ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳುವ ಚಿತ್ರ ಅಥವಾ ನಿರ್ದೇಶಕ ಬರಲಿಲ್ಲ, ಹಾಗಾಗಿ ಅವರು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದು ಬಿಟ್ಟರು.

ಶಶಿ ಎರಡು ನಾಯಕರಿರುವ ಅಥವಾ ಮಹಿಳಾ ಪ್ರಧಾನ ಕತೆಗಳಲ್ಲಿ ಅಭಿನಯಿಸಿದ್ದೇ ಅವರ ಹಿನ್ನಡೆಗೆ ಕಾರಣ,
-GK ಅಡ್ಯಂತಾಯ)

ಅದು ಹೌದು, ಅಭಿಜಿತ್ ಸಹಾ ಹೀಗೆ ಮೂಲೆಗುಂಪಾಗಿದ್ದು.

ಶಶಿಕುಮಾರ್ ಕುಂತೀಪುತ್ರದಲ್ಲಿ ವಿಷ್ಣುವರ್ಧನ್ ಅವರಿಗಿಂತ ಹೆಚ್ಚು ಸ್ಕೋಪ್ ಇದ್ದ ಪಾತ್ರ ಸಿಕ್ಕಿತ್ತು ಇವರಿಗೆ, ಇವರಿಗೆ ಪ್ರಮುಖ ಪಾತ್ರ ನೀಡಿದ್ದ ವಿಷ್ಣುವರ್ಧನ್ ತಮಗೆ ಅನಾವಶ್ಯಕ ಬಿಲ್ಡಪ್ ಕೊಡಲು ಹೋಗಿ ಕಥೆಯನ್ನು ಹಾಳುಮಾಡಬೇಡಿ ಎಂದು ನಿರ್ದೇಶಕರಿಗೆ ಮೊದಲೇ ತಾಕೀತು ಮಾಡಿದ್ದರು, ಹೀಗಾಗಿ ಶಶಿಕುಮಾರ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಮತ್ತು ಪ್ರೇಮಿಯಾಗಿ ಮಿಂಚಿದ್ದರು.

ಅದರಲ್ಲಿ ಬರುವ ಒಂದು ಡೈಲಾಗ್ "ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ತೋಟದಲ್ಲಿ ಇದ್ದ ಮಾಲಿ ಅಷ್ಟೇ" ಎಂಬ ಡೈಲಾಗ್ ಗಮನ ಸೆಳೆಯುತ್ತದೆ.

ಈ ಬಗ್ಗೆ ಒಮ್ಮೆ ರೂಪತಾರಾದಲ್ಲಿ ನನಗೆ ಸಿಕ್ಕಿರುವ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ವಿಷ್ಣು ಅವರಂಥಹ ನಿಸ್ವಾರ್ಥ ಸಹನಟ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ಅಪಘಾತವಾಗದಿದ್ದರೆ ಅವರು ಇನ್ನಷ್ಟು ಒಳ್ಳೆಯ ಚಿತ್ರಗಳಲ್ಲಿ ‌ನಟಿಸುತ್ತಿದ್ದರು....,

ಬೆಸ್ಟ್ ಆಫ್ ಲಕ್ ಶಶಿಕುಮಾರ್ ಸರ್

By
Maruthivardhan

Friday, December 6, 2019

ಗ್ರಾಹಕನ ಬಗೆಗಿನ ಗಾಂಧೀಜಿ ಯವರ ಪುಟ್ಟ ಮನಮುಟ್ಟುವ ಅಭಿಪ್ರಾಯ, Gandhiji's views about a customer

"ಗ್ರಾಹಕನು ನಮ್ಮ ಕಛೇರಿಗೆ ಬರುವ ಬಹಳ ಮುಖ್ಯವಾದ ಅತಿಥಿಯಾಗಿದ್ದಾನೆ.

ಅವನು ನಮ್ಮ ಮೇಲೆ ಅವಲಂಬಿತನಾಗಿಲ್ಲ. ನಾವು ಅವನ ಮೇಲೆ ಅವಲಂಬಿತರಾಗಿದ್ದೇವೆ.
ಅವನು ನಮ್ಮ ಕೆಲಸದಲ್ಲಿ ಅಡ್ಡಿಪಡಿಸುವವನಲ್ಲ - ನಮ್ಮ ಕೆಲಸದ ಉದ್ದೇಶವೇ ಅವನು.

ನಾವು ಅವನಿಗೆ ಸೇವೆ ಸಲ್ಲಿಸುವ ಮೂಲಕ ಅವನಿಗೆ ಉಪಕಾರ ಮಾಡುತ್ತಿಲ್ಲ.
ಬದಲಾಗಿ ಆತನ ಸೇವೆ ಮಾಡಲು ನಮಗೆ ಅವಕಾಶ ನೀಡುವ ಮೂಲಕ ಆತನೇ ನಮಗೆ ಉಪಕಾರ ಮಾಡುತ್ತಿದ್ದಾನೆ.,

 ಆತನು ಇಲ್ಲದಿರುತ್ತಿದ್ದರೆ ನಿನಗೆ ಈ ಹುದ್ದೆಯೂ ಇರುತ್ತಿರಲಿಲ್ಲ, ನಿನಗೆ ಸಂಬಳವೂ ಇರುತ್ತಿರಲಿಲ್ಲ, ನಿನ್ನ ಜೀವನವು ಹಸಿವಿನಿಂದ ಕಳೆಯಬೇಕಾಗಿತ್ತು, ಅದಕ್ಕಾಗಿ ಗ್ರಾಹಕನಿಗೆ ಋಣಿಯಾಗಿರು.

ಅವನು ಬಂದಾಗ‌ ಮುಖ ಸಿಂಡರಿಸಿಕೊಳ್ಳದೆ ಅವನ‌ಕೆಲಸ ಮಾಡಿಕೊಟ್ಟು ನಿನಗೆ ಆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕಾಗಿ  ಧನ್ಯವಾದ ಹೇಳು.

- ಮಹಾತ್ಮ ಗಾಂಧಿ "

“A customer is the most important visitor on our premises.  He is not dependent on us. We are dependent on him.  He is not an interruption in our work – he is the purpose of it.  We are not doing him a favor by serving him. He is doing us a favor by giving us the opportunity to serve him.

– Mahatma Gandhi”



Tuesday, December 3, 2019

ಸಕ್ಕರೆ ಖಾಯಿಲೆ & ಕ್ಯಾನ್ಸರ್ ಅನ್ನು ಗುಣಪಡಿಸಬೇಕಾದದ್ದು ಹಿಂದೂ ಧರ್ಮವೇ ಅಥವಾ ಆಸ್ಪತ್ರೆಯೇ?


*ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಕ್ಯಾನ್ಸರ್ ಗುಣವಾಗುತ್ತದೆ.

*ಗೋಮೂತ್ರವನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆ ಗುಣವಾಗುತ್ತದೆ ಎಂಬಂಥಹ ಹೇಳಿಕೆಗಳನ್ನು ಕೆಲವರು ಕೊಡುತ್ತಾರೆ,
ಬೇರೆಯವರು ಅದನ್ನು ನೋಡಿ ಉರುಳಾಡಿಕೊಂಡು ನಕ್ಕು ಚರ್ಚೆ ಮಾಡಲು ಬಂದಾಗ ಅವರ ಮೇಲೆ ಜಗಳಕ್ಕೆ ಹೋಗುತ್ತಾರೆ.
ರೋಗಗಳನ್ನು ಗುಣಪಡಿಸುವುದು  ಧರ್ಮದ ಕೆಲಸ ಅಲ್ಲ, ಆದರೂ ಇವರು ರೋಗ ವಾಸಮಾಡುವ ಹೊಣೆಗಾರಿಕೆಯನ್ನು ಅನಾವಶ್ಯಕವಾಗಿ ತಲೆಯ ಮೇಲೆ ಎಳೆದುಕೊಳ್ಳುತ್ತಾರೆ ಮತ್ತು ತಮ್ಮ ಹೊಣೆಯನ್ನು ನಿಭಾಯಿಸಲು ಒದ್ದಾಡಿ, ನಂತರ ಸಫಲತೆ-ವಿಫಲತೆಗಳ ಬಗ್ಗೆ ಚರ್ಚೆಮಾಡಿ ಬಿಪಿ ರೈಸ್ ಮಾಡಿಸಿಕೊಂಡು ಕೂಗಾಡುವುದು ಏಕೆ?
ಸಿಂಪಲ್ ಆಗಿ ಕ್ಯಾನ್ಸರ್ ಅಥವಾ ಷುಗರ್ ಅನ್ನು ಗುಣಪಡಿಸುವುದು ಧರ್ಮದ ಕೆಲಸ ಅಲ್ಲವೆಂಬ ಸತ್ಯವನ್ನು ಜನರಿಗೆ ತಿಳಿಯಪಡಿಸಿ ಆ ಮೂಲಕ ತಾವು ಪ್ರಾಮಾಣಿಕತೆಯನ್ನು ನಿರೂಪಿಸಿ ಜನರ ಎದುರು ದೊಡ್ಡವರಾಗುವ ಕೆಲವನ್ನೇಕೆ ಮಾಡುವುದಿಲ್ಲವೋ ಅರ್ಥವಾಗುತ್ತಿಲ್ಲ.
**
ಇನ್ನೊಂದು ಕಡೆ ಯಾರೋ ಬ್ರೈನ್ ವಾಷ್ ಮತಾಂತರ ಕಂಪನಿಯವರು ಕೊಳಗೇರಿಗಳಲ್ಲಿ ಒಂದು ಬಾಡಿಗೆ ಮನೆಯನ್ನು ಹಿಡಿಯುತ್ತಾರೆ, ಅಲ್ಲಿ ಕೆಳಜಾತಿಗಳನ್ನವರನ್ನೆಲ್ಲ ಗುಂಪುಗೂಡಿಸಿ ಅವರ ತಂದೆ ತಾಯಿ ಅಜ್ಜ ಅಜ್ಜಿ ಆಚರಿಸಿದ್ದ ಆಚರಣೆಗಳನ್ನು ಹೀಗಳೆದು ಬ್ರೈನ್ ವಾಷ್ ಮಾಡುತ್ತಾರೆ ಆಮೇಲೆ ಪ್ರತಿ ಭಾನುವಾರ ಪ್ರಾರ್ಥನೆ ಮಾಡಿಸುತ್ತಾರೆ,  
ಪ್ರಾರ್ಥನೆ ಮಾಡಿಸುವ ಅವನು ಮೈಕ್ ಹಿಡಿದುಕೊಂಡು ಕೈಯನ್ನು ಜಾಡಿಸಿದರೆ ಎದುರುಗಡೆ ಇರುವವರು ಫಿಟ್ಸ್ ಬಂದಂತೆ ಆ್ಯಕ್ಟಿಂಗ್ ಮಾಡಿ ನೆಲಕ್ಕೆ ಬಿದ್ದು ಉರುಳಾಡುತ್ತಾರೆ.
ಮನುಷ್ಯನಾದವನಿಗೆ ಒಂದು ಸಮಸ್ಯೆ ಇರುತ್ತದೆ, ಅದು ಮಂಡಿ ನೋವಿನ‌ ಸಮಸ್ಯೆ, ತಲೆನೋವು ಬರುವುದು, ಕಣ್ಣು ‌ಮಂಜಾಗುವುದು, ಮಾಡಿದ ಕೆಲಸ ಕೈ ಹಿಡಿಯದಿರದಿರುವುದು, ಇನ್ನೂ ಕೆಲವರಿಗೆ ಸತ್ತ ತಮ್ಮ ಬಂಧ ಬಳಗದವರು ಮಾತನಾಡಿಸಿದಂತೆ ಭ್ರಮೆ ಉಂಟಾಗುವುದು ಈ ರೀತಿಯಲ್ಲಿ ಭ್ರಮೆ ಹೊಂದಿ ಮಾನಸಿಕವಾಗಿ ವೀಕ್ ಆಗಿರುವ ಜನರನ್ನು ಪರಿಹಾರ ತೋರಿಸುವ ನೆಪದಲ್ಲಿ ಬ್ರೈನ್ ವಾಷ್ ಮಾಡಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಸುವುದೇ ಇವರ ಕೆಲಸ‌.
ರೋಗ ಗುಣಪಡಿಸಿದ್ದೇವೆಂಬ ಭ್ರಮೆ ಉಂಟುಮಾಡುತ್ತಾರೆ.
**
ಇನ್ನೊಂದು ಕಡೆ ನಮ್ಮ ದೇವರೇ ಸರ್ವಸ್ವ, ನಮ್ಮ ದೇವರನ್ನು ನಂಬದ ಮತ್ತು ಬೇರೆ ಯಾವುದೇ ದೇವರನ್ನು ಪೂಜಿಸುವ ಜನರಿಗೆ ನರಕದಲ್ಲಿ ಫ್ರೈ ಮಾಡಲಾಗುತ್ತದೆ ಎಂದು ನಂಬಿಸಲಾಗುತ್ತದೆ. (ಎಲ್ಲರೂ ಅಲ್ಲ, ಕೆಲ‌ ಮತಾಂಧರು ಮಾತ್ರ, ಅದೃಷ್ಟವಶಾತ್ ಅವರ ಸಂಖ್ಯೆ ಕಡಿಮೆ ಇದೆ)
ಬೇರೆ ದೇವರ ಅನುಯಾಯಿಗಳನ್ನು ಕೊಂದರೆ ಮೇಲೆ ಸ್ವರ್ಗದಲ್ಲಿ ಉತ್ತಮ ಸ್ಥಾನಮಾನಗಳನ್ನು ಕೊಡಲಾಗುತ್ತದೆ ಎಂದು ನಂಬಿಸಿ..‌ ಅವನಿಗೆ ಬಾಂಬ್ ಕಟ್ಟಿ ಸೂಸೈಡ್ ಬಾಂಬರ್ ಆಗಿ ಬದಲಾಯಿಸಿ ಮಾರ್ಕೆಟ್, ಬಸ್ಟಾಂಡ್ ಈ ರೀತಿಯ ಜನನಿಬಿಡ ಸ್ಥಳಗಳಲ್ಲಿ ಬ್ಲಾಸ್ಟ್ ಮಾಡಿಕೊಳ್ಳುವಂತೆ ಬ್ರೈನ್ ವಾಷ್ ಮಾಡಲಾಗುತ್ತದೆ, ಪಾಪ ಈ ಜನ್ಮದಲ್ಲಿ ಮನುಷ್ಯನಾಗಿ ಜನಿಸಿದ್ದ ಇವನು ಅಷ್ಟೊಂದು ಸೂಸೈಡ್ ಬಾಂಬಿಂಗ್‌ನಲ್ಲಿ ಎಷ್ಟೋ ಮುಗ್ಧ ಜನರ ಕೊಂದ ಪಾಪಕ್ಕಾಗಿ ನಾಯಿಯಾಗಿಯೋ ಹಂದಿಯಾಗಿಯೋ ಮುಂದಿನ ಜನ್ಮದಲ್ಲಿ ಹುಟ್ಟುತ್ತಾನೆ...
**
#ಉಪಸಂಹಾರ:
ಹಿಂದೂ ಧರ್ಮ ಒಂದು ಜೀವನ ವಿಧಾನ, ಜಗತ್ತಿನ ಜನರು ಗೌರವಿಸುವ ಏಕೈಕ ಶಾಂತಿ ಧರ್ಮ, ಸುಮಾರು ೧೦೦೦೦ ವರ್ಷಗಳ ಇತಿಹಾಸದಲ್ಲಿ ಭರತಖಂಡವು ಯಾವೊಬ್ಬ ದೇಶದ ಮೇಲೂ ತಾನಾಗಿ ದಂಡೆತ್ತಿ ಹೋಗಿಲ್ಲ, ಇತರರು ತನ್ನ ಮೇಲೆ ದಾಳಿಮಾಡಿದಾಗ ಸ್ವರಕ್ಷಣೆ ಮಾಡಕೊಂಡಿದೆ ಅಷ್ಟೇ.
ಆದರೆ ಕ್ಯಾನ್ಸರ್, ಸಕ್ಕರೆ ಖಾಯಿಲೆ ಇವು ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವ ಹೆಚ್ಚು ನಿಗಾವಹಿಸಬೇಕಾದ ಖಾಯಿಲೆಗಳು, ಈ ರೋಗಿಗಳು ವೈದ್ಯರ ನಿರ್ದೇಶನದಂತೆ ನಡೆಯಬೇಕಾಗುತ್ತದೆ, ಹಾಗಿದ್ದಾಗ ಮಾತ್ರ ಸಾಮಾನ್ಯರಂತೆ ಜೀವನ‌ನಡೆಸಬಲ್ಲರು, ಇಲ್ಲದಿದ್ದರೆ  45-50ವಯಸ್ಸಿನಲ್ಲಿ ಸಾವಿಗೀಡಾಗುವರು, ಅವರನ್ನೇ ನಂಬಿಕೊಂಡ ಕುಟುಂಬದ, ಪತ್ನಿಯ ಗತಿಯೇನು? ಆಕೆ ಒಬ್ಬಂಟಿಯಾಗಿ ತನ್ನ ಜೀವನ ಸವೆಸಬೇಕೆ?
ಹಿಂದೂ ಧರ್ಮ ಕಾಯಿಲೆಗಳನ್ನು ವಾಸಿ ಮಾಡುವ ಆಸ್ಪತ್ರೆ ಅಲ್ಲ, ಇದು ಅದರ ಕರ್ತವ್ಯದ ಪರಿಧಿಯಲ್ಲಿ ಬರುವುದಿಲ್ಲ ಅಥವಾ ಕರ್ತವ್ಯದ ಭಾಗವೂ ಅಲ್ಲ, ಅಥವಾ ಯಾವುದೇ ಖಾಯಿಲೆಗೆ ಔಷದಿ ಕೊಡಲಿಲ್ಲವೆಂಬ ಕಾರಣಕ್ಕಾಗಿ ಹಿಂದೂಧರ್ಮವನ್ನು ತಿರಸ್ಕರಿಸಲೂ ಸಾದ್ಯವಿಲ್ಲ,
ಜನರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿ ಯಶಸ್ಸಿಗಾಗಿ ದೇವರಲ್ಲಿ ಯಶಸ್ಸಿಗಾಗಿ‌ ಮೊರೆಯಿಡಬಹುದು, ಆದರೆ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಅಂದುಕೊಳ್ಳುವುದು ತಪ್ಪು, ವೈದ್ಯರ ಭೇಟಿಯ ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ...., ಯಾರೋ ಒಬ್ಬ ಢೋಂಗಿ ಗುರೂಜಿ ಹೇಳಿದಂತೆ ಗೋಮೂತ್ರ ಕುಡಿದು ಸುಮ್ಮನಿದ್ದರೆ ಕ್ಯಾನ್ಸರ್ ಉಲ್ಭಣಿಸುತ್ತದೆ, ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ,
ಸಾಮಾನ್ಯವಾಗಿ ಇಂತಹ ಗುರೂಜಿಗಳು ರೋಗದ ಗುಣಕ್ಕಾಗಿ ಯಾಗ, ಯಜ್ಞ ಮಾಡಿಸುವುದು... ಸಾಕಷ್ಟು ಹಣ ಖರ್ಚು ಮಾಡಿಸುತ್ತಾರೆ.
ಇಂಥಹವರು ಧರ್ಮದ ಹೆಸರಿನಲ್ಲಿ ಜನರೆ ತಪ್ಪುದಾರಿಗೆ ಎಳೆದಾಗ ನಾವು ಅವರನ್ನು ವಿರೋಧಿಸಬೇಕು, ಇದೇ ನಿಜವಾದ ಧರ್ಮ ರಕ್ಷಣೆ, ಇದೇ ನಿಜವಾದ ಹಿಂದುತ್ವ.
ಒಂದು ವೇಳೆ ಪ್ರೋತ್ಸಾಹ ಕೊಟ್ಟರೆ ಅಥವಾ ಕಮೀಷನ್ ತೆಗೆದುಕೊಂಡರೆ ಅದು ಸ್ವಾರ್ಥ ಮತ್ತು ನಕಲಿ ಹಿಂದುತ್ವ.
***
ಸತಿಸಹಗಮನ ಪದ್ದತಿ ಈ ಹಿಂದೆ ಇತ್ತು, ಈಗ ಇಲ್ಲ, ರಾಜಾರಾಮ್ ಮೋಹನ ರಾಯ್, ದಯಾನಂದ ಸರಸ್ವತಿ ರವರು ಬ್ರಿಟೀಷರ ಕಾಲದಲ್ಲಿ ಅದರ ವಿರುದ್ಧ ಹೋರಾಡಿ ಸತಿನಿಷೇದ ಕಾನೂನು ತಂದರು.., ಒಂದು ಕಾಲದಲ್ಲಿ ಸತಿಸಹಗಮನ ಪದ್ದತಿಯನ್ನು ಸಮರ್ಥಿಸುತ್ತಿದ್ದ ಮಡಿವಂತ ಹಿಂದುಗಳೇ ಇಂದು ವಿರೋಧಿಸಿದ್ದಾರೆ, ಇದು ನಿಜವಾದ ಹಿಂದುವಿನ ಲಕ್ಷಣ.
ಬಾಲ್ಯವಿವಾಹ ಇತ್ತು ಈಗ ಇಲ್ಲ, ಮಡಿವಂತರೇ ಇದನ್ನು ಹೊಗಟ್ಟಿದ್ದಾರೆ..., ಇದು ನಿಜವಾದ ಬದಲಾವಣೆ.
ಎಲ್ಲಾ ಧರ್ಮಗಳಲ್ಲಿ ದೋಷಗಳು ಇವೆ, ಆದರೆ ದೋಷಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುವ ಕ್ರಮ ಯಾರೂ ತೆಗೆದುಕೊಂಡಿಲ್ಲ...
ಬದಲಾವಣೆ ಪ್ರಕ್ರಿಯೆಗೆ ಒಳಗಾದ ಏಕೈಕ ಧರ್ಮ ನಮ್ಮದೇ ಹಿಂದೂ ಧರ್ಮ.
ಯಾವ ಆಚರಣೆಗಳಿಂದ ಜನರಿಗೆ‌ ಕೆಡುಕುಂಟಾಗುವುದಿಲ್ಲವೋ ಅದು ಮೂಢನಂಬಿಕೆಯಾದರೂ ಸಹಾ ಅದಕ್ಕೆ ನನ್ನ ಬೆಂಬಲವಿದೆ...,
ಆದರೆ ಯಾವ ಆಚರಣೆಯ ಹೆಸರಿನಲ್ಲಿ ತೊಂದರೆ ಉಂಟಾಗುವುದೋ ಅದಕ್ಕೆ ಸಹಮತವಿಲ್ಲ.
ನಾಸ್ತಿಕರು ವಿರೋದಿಸುವ..., ಆದರೆ ನಾನು ಸಮರ್ಥಿಸುವ ಪೂಜೆ, ಅಭ್ಯಂಜನ, ಜಾತ್ರೆ, ತೇರು, ಭೂತಕೋಲ, ಮೆರವಣಿಗೆ, ಸಂಸ್ಕೃತಿಗಳ ಆಚರಣೆ ಇವೆಲ್ಲವನ್ನೂ ನಾನು ವೈಯಕ್ತಿಕವಾಗಿ ನಂಬುತ್ತೇನೆ... ಏಕೆಂದರೆ ಈ ಆಚರಣೆಗಳಿಂದ ಯಾರಿಗೂ ಕೆಡುಕಾಗುವುದಿಲ್ಲ..., ಹಣ ಖರ್ಚಾದರೆ ನಮ್ಮದೇ ಹೋಗಲಿ ಸ್ವಲ್ಪ ಖುಷಿ ನೆಮ್ಮದಿ ಸಿಗುತ್ತದೆ..., ಮತ್ತು ಈ ಆಚರಣೆಗಳಿಂದ ನೆಮ್ಮದಿ, ಖುಷಿ ಸಿಗುತ್ತದೆ.
"ಸಕ್ಕರೆ ಕಾಯಿಲೆ, ಕ್ಯಾನ್ಸರ್ ಅನ್ನು ವಾಸಿಮಾಡಬೇಕಾದದ್ದು ಹಿಂದೂಧರ್ಮದ ಕರ್ತವ್ಯವೋ?
by
Maruthi Vardhan

"ಹಾಲು, ಅಭಿಷೇಕ, ಹಾರ ವ್ಯರ್ಥವೇ!", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/6LEhMSLmW031?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ"
ಮಾಂಸಾಹಾರ ತಿಂದಿದ್ದ ವಿದ್ಯಾರ್ಥಿ ಪೂಜೆ ಮಾಡಲು ನಿರಾಕರಿಸಿದ್ದೇಕೆ...?", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/etjv9kgvg9y9?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
By - Maruthi Vardhan